ಮನವೇ ನಿನ್ನನ್ನು ನೀನೆ ಪ್ರೀತಿಸು

 


ಎಲ್ಲವರು ನಿನ್ನವರೇ ಎಂದು ಆಶಿಸು

ಕಹಿ ಇಲ್ಲದೆ ಮಕರಂದ ಮಾತಾಡಿಸು

ಮತ್ತೊಬ್ಬರಿಂದ ನಿನ್ನ ಖುಷಿಯ ನಿರೀಕ್ಷೆ ನಿಲ್ಲಿಸು

ಮನವೇ ನಿನ್ನನ್ನು ನೀನೆ ಪ್ರೀತಿಸು!!


ನಿನ್ನವರಲ್ಲಿ ವ್ಯತ್ಯಾಸ ಬಂದರೆ, ಆ ಕ್ಷಣವನ್ನೊಮ್ಮೆ ನಿಲ್ಲಿಸು ಪರಿಶೀಲಿಸು,

ಕ್ಷಣ ಒಂದೂ ಬೇಡ ನಿನ್ನಲ್ಲಿ ಮುನಿಸು

ನಿನ್ನಮೇಲಿನ ನಿನ್ನ ಪ್ರೀತಿಗೆ ಅವರನ್ನು ಕ್ಷಮಿಸು!

ಮನವೇ ನಿನ್ನನ್ನು ನೀನೆ ಪ್ರೀತಿಸು!!


ಪ್ರತಿ ದಿನ ನಿನ್ನ ಕೊನೆಯದಿನವೆಂದು ಜೀವಿಸು

ನಿನ್ನ ಸ್ಪೂರ್ತಿಯಿಂದ ನಿನ್ನನ್ನೇ ಜಿಗಿದು ಕುಣಿಸು

ನಿನ್ನ ಆನಂದವೊಂದನ್ನೇ ಆರಾಧಿಸು

ಮನವೇ ನಿನ್ನನ್ನು ನೀನೆ ಪ್ರೀತಿಸು!!

ಕಾಮೆಂಟ್‌ಗಳು