"ಮನೆ ಬಾಡಿಗೆಗೆ ಇದೆ" ಲೇಖಕಿ ಅನುರಾಧ ಸಂದರ್ಶನ

 

ಮ್ಯಾಜಿಕ್ ಆಥರ್: "ಮನೆ ಬಾಡಿಗೆಗೆ ಇದೆ" ಈ ಪುಸ್ತಕ ಮನೆ ಬಾಡಿಗೆದಾರರ ಹಾಗೂ ಮನೆ ಮಾಲೀಕರ ಕುರಿತು ಒಂದು ಅನನ್ಯ ಕಥೆ .ಈ ಕಥೆ ಬರೆಯಲು ಸ್ಪೂರ್ತಿ ಏನು?

ಅನುರಾಧ: ನನ್ನ ಜೀವನದಲ್ಲಿ ನಡೆದಿರುವ ನಿಜವಾದ ಕಥೆ. ನನ್ನ ಬಂಧುಮಿತ್ರರೊಡನೆ ಮಾತನಾಡಿದಾಗ ಸುಮಾರು ಜನ ಈ ಪರಿಸ್ಥಿತಿ - ಅದು ಬಾಡಿಗೆದಾರರ ಕೈಯಲ್ಲಿ ಸಿಲುಕಿ ಕಷ್ಟಪಟ್ಟ ಅನುಭವದವರಿದ್ದಾರೆ- ಎಂದು ತಿಳಿಯಿತು.ಇವರೆಲ್ಲ ಪೊಲೀಸರ ಹಾಗೂ ವಕೀಲರ ಸಹಾಯವಿಲ್ಲದೇ ಕಷ್ಟದಿಂದ ನುಸುಳಿ ಹೊರ ಬಂದ ರೀತಿ ನನಗೆ ಇಷ್ಟವಾಯಿತು.ಈ ಕಥೆಯಿಂದ ಒಬ್ಬರಿಗಾದರೂ ಸಹಾಯವಾಗಲೆಂದು ಕಥೆ ಬರೆದೆ


ಮ್ಯಾಜಿಕ್ ಆಥರ್: ಈ ಕಥೆ ಬರೆಯಲು ಯಾವ ರೀತಿಯ ಸಂಶೋಧನೆ ಮಾಡಿದಿರಿ?

ಅನುರಾಧ: ಈ ಪುಸ್ತಕದ ಕಥೆಗಳಲ್ಲ ನಿಜವಾದದ್ದು. ಸುಮಾರು ಜನರು influence ಬಳಸಿ ತಮ್ಮ ಕೆಲಸವನ್ನು ನಡೆಸಿಕೊಳ್ಳುತ್ತಾರೆ . ಸಾಧಾರಣ ಜನರು ಯಾವ ರೀತಿಯ influence ಇಲ್ಲದೆ ಪೊಲೀಸರ ಹಾಗೂ ವಕೀಲರ ಸಹಾಯ ಪಡೆಯದೇ ಗೆಲುವನ್ನು ಕಂಡಿದ್ದಾರೆ. ಅವರೊಡನೆ ಕುಳಿತು ಅವರ ಅನುಭವ ತಿಳಿದು ಅದನ್ನೇ ಆಧಾರವಾಗಿಟ್ಟುಕೊಂಡು ಈ ಪುಸ್ತಕ ಬರೆದೆ.


ಮ್ಯಾಜಿಕ್ ಆಥರ್: ನಮ್ಮ ಕರ್ನಾಟಕದಲ್ಲಿ ಹೊರ ಊರಿನಿಂದ ಬಂದವರಿದ್ದಾರೆ. ಈ ಪುಸ್ತಕವನ್ನು ಆಂಗ್ಲ ಭಾಷೆಯಲ್ಲಿ ಅನುವಾದಿಸುವ ಯೋಚನೆ ಇದೆಯಾ?

ಅನುರಾಧ: ಹೌದು ಆಂಗ್ಲ ಭಾಷೆಯಲ್ಲಿ ಅನುವಾದ ಮಾಡ್ತಾ ಇದ್ದೇನೆ.


ಮ್ಯಾಜಿಕ್ ಆಥರ್: ನಿಮ್ಮ ಮುಂದಿನ ಪುಸ್ತಕ ಯಾವುದರ ಬಗ್ಗೆ?

ಅನುರಾಧ: "ಟಾಮ್ ಮತ್ತು ಲೈಲಾ" ಎಂದು ಸಬ್ ಕಾನ್ಶಿಯಸ್ ಅಥವಾ ಉಪಪ್ರಜ್ಞೆ ಮನಸ್ಸಿನ ಬಗ್ಗೆ


ಮ್ಯಾಜಿಕ್ ಆಥರ್: ಈ ಪುಸ್ತಕದಿಂದ ಯಾವ ರೀತಿಯ ಪ್ರಭಾವ ಬಯಸುತ್ತಿದ್ದೀರಿ? 

ಅನುರಾಧ: ನಾನು ಮೊದಲು ಹೇಳಿದ ಹಾಗೆ ಕನಿಷ್ಠ ಒಬ್ಬರಿಗಾದರೂ ಈ ಪುಸ್ತಕದಿಂದ ಸಹಾಯವಾದರೆ ನನಗೆ ಸಾಕು. ನಾನು ಡಿಸಿಪಿ, ಡಿ ಜಿ ಪಿ ಗಳನ್ನು ಭೇಟಿಯಾಗಿ ನ್ಯಾಯ ಷರತ್ತುಗಳ ಬಗ್ಗೆ ಅವರ ಅಭಿಪ್ರಾಯ ಪಡೆದು ಪೊಲೀಸರ ಮಿತಿಯಲ್ಲಿ ಏನು ಮಾಡಬಹುದು ದಲ್ಲಿ ಮಾಹಿತಿ ನೀಡಿದ್ದೇನೆ.


"ಮನೆ ಬಾಡಿಗೆಗೆ ಇದೆ" - ಈ ಪುಸ್ತಕದಲ್ಲಿ ಮನೆ ಮಾಲೀಕರ ಹಾಗು ಬಾಡಿಗೆದಾರರ ಕಹಿ ಅನುಭವ ಮತ್ತು ಅದರಿಂದ ಚಾಣಕ್ಯತೆಯಿಂದ ಹೇಗೆ ಪಾರಾದರು ಎನ್ನುವ ಕಥೆಗಳು ಇವೆ. ಈ ಪುಸ್ತಕದಲ್ಲಿ, ಪೋಲೀಸರ ಮಿತಿಯಲ್ಲಿ ಏನು ಮಾಡಬಹುದೆನ್ನುವ ಟಿಪ್ಪಣಿ ಇದೆ.   Buy this ebook


ಕಾಮೆಂಟ್‌ಗಳು